ರಾಯಚೂರು ಮಾನ್ವಿ ತಾಲ್ಲೂಕು ವರದಿ. 12-1-2019

ರಾಯಚೂರು
ಮಾನ್ವಿ ತಾಲ್ಲೂಕು ವರದಿ.
12-1-2019

ವಿಷಯ ಸರಣಿ ಕಳ್ಳತನ ಅಪಾರ ಮೌಲ್ಯದ ಚಿನ್ನಾಭರಣ ನಗದು ಕಳವು: ಆರೋಪಿಗಳ ಪತ್ತೆಗೆ ಪೊಲೀಸರ ಬಲೆ .

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಪಂ ವ್ಯಾಪ್ತಿಗೆ ಬರುವ ಗವಿಗಟು, ಅಮರಾವತಿ, ಆಲ್ದಾಳ್ ಕ್ಯಾಂಪಿನ ದೇವಸ್ಥಾನ ಮನೆಗಳಲ್ಲಿ ಚಿನ್ನಾಭರಣ ಮತ್ತು ನಗದು ಹಣ ದೋಚಿ ಪರಾರಿಯಾದ ಸರಣಿ ಕಳ್ಳತನ ಪ್ರಕರಣ ಗುರುವಾರ ತಡರಾತ್ರಿ ನಡೆದಿದೆ .

ಗವಿಗಟ್ ಗ್ರಾಮದ ಶರಣಪ್ಪ ಅಂಗಡಿ ತಂದೆ ಶಿವರಾಜಪ್ಪ ಮನೆಯ ಬೀಗ ಮುರಿದು ಮನೆಯಲ್ಲಿದ್ದ 8 ತೊಲೆ ಬಂಗಾರ ಮತ್ತು 1.6o ಲಕ್ಷ ರೂಪಾಯಿ ನಗದು ಹಣ ದೋಚಿದ್ದಾರೆ . ಇದೇ ಗ್ರಾಮದ ಕಿರಣಿ ಅಂಗಡಿ, ಶ್ರೀ ವೀರಭದ್ರೇಶ್ವರ ಮೆಡಿಕಲ್ ಸ್ಟೋರ್, ಶ್ರೀ ಸಿದ್ದರಾಮೇಶ್ವರ ಕ್ಯಾನ್ಸಾ ಸಿಂಗ್ ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಇದೇ ದಿನ ತಡರಾತ್ರಿ ಅಮರಾವತಿ ಗ್ರಾಮದ ಮಲ್ಲನಗೌಡ ತಂದೆ ರುದ್ರಗೌಡ ಮನೆಯ ಬೀಗ ಮುರಿದು 11 ತೊಲೆ ಬಂಗಾರ 5 ಲಕ್ಷ ರೂಪಾಯಿ ನಗದು ಹಣ ಕಳ್ಳತನ ನಡೆದಿದೆ ನಂತರ ಆಲ್ದಾಳ್ ಕ್ಯಾಂಪ್ನ ಶ್ರೀರಾಮ ದೇವಸ್ಥಾನ ಬೀಗ ಮುರದು ದೇವಸ್ಥಾನದಲ್ಲಿ ಇಪ್ಪತ್ತೈದು ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ .

ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಸಿಂಧನೂರು ಡಿವೈಎಸ್ಪಿ, ಮಾನ್ವಿ ಸಿಪಿಐ ಚಂದ್ರಶೇಖರ್ ನಾಯಕ, ಪಿಎಸ್ಐ ರಂಗಪ್ಪ ಎಚ್ ದೊಡ್ಡಮನಿ ಭೇಟಿ ನೀಡಿದ್ದಾರೆ . ಆರೋಪಿಗಳ ಪತ್ತೆಗಾಗಿ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪೊಲೀಸರಿಂದ ಶೋಧ ಕಾರ್ಯ ನಡೆಸಲಾಗಿದೆ .ಪ್ರಕರಣಗಳನ್ನು ದಾಖಲಿಸಿಕೊಂಡು ಈಗಾಗಲೇ ಕಳ್ಳರ ಪತ್ತೆಗಾಗಿ ಮಾನ್ವಿ ಸಿಪಿಐ, ಪಿಎಸ್ಐ ಹಾಗೂ ಕವಿತಾಳ ಪಿಎಸ್ಐ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಆರೋಪಿಗಳಿಗೆ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಸಿಂಧನೂರು ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಪತ್ರಿಕೆಗೆ ತಿಳಿಸಿದ್ದಾರೆ.

ಕುಮಾರ ಪಾಟೀಲ
JMR News Chikodi

admin