ಘಟನೆಯಲ್ಲಿ ಒಟ್ಟು 7 ಜನ ವಿಧ್ಯಾರ್ಥಿಗಳಿಗೆ ಗಂಭೀರಗಾಯಗಳಾಗಿವೆ.

ಧಾರವಾಡ-ವರದಿ

ಗಣರಾಜ್ಯೋತ್ಸವದ ಸಂಭ್ರಮದಲ್ಲಿರಬೇಕಾದ ಧಾರವಾಡ ಇವತ್ತು ಶೋಕ ವಾತಾವರಣಕ್ಕೆ ತಿರುಗಿತ್ತು. ಕೆ ಇ ಬೋರ್ಡ ಶಾಲೆಯಲ್ಲಿ ದ್ವಜಾರೋಹಣ ನೆರವೇರಿಸಿ ಸಾರ್ವಜನಿಕ ದ್ವಜಾರೋಹಣ ನೇರವೇರುವ ಆರ್ ಎನ್ ಶೆಟ್ಟಿ ಕ್ರೀಡಾಂಗಣಕ್ಕೆ ಹೊರಟಿದ್ದ ಮಕ್ಕಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೂಜಾ ವಡ್ಡರ ಎಂಬ ವಿಧ್ಯಾರ್ಥಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಘಟನೆಯಲ್ಲಿ ಒಟ್ಟು 7 ಜನ ವಿಧ್ಯಾರ್ಥಿಗಳಿಗೆ ಗಂಭೀರಗಾಯಗಳಾಗಿವೆ.

ಅನ್ನಪೂರ್ಣಾ ಎಂಬ ವಿಧ್ಯಾರ್ಥಿನಿಯ ಎರಡು ಕಾಲುಗಳು ಮುರಿದಿವೆ. ಪೂಜಾ ಹಾಗೂ ಅನ್ನಪೂರ್ಣಾ ಎಂಬ ವಿಧ್ಯಾರ್ಥಿನಿಯರನ್ನು ಎಸ್ ಡಿ ಎಮ್ ಆಸ್ಪತ್ರೆಗೆ ಧಾಖಲಿಸಲಾಗಿದೆ.

ಇನ್ನುಳಿದಂತೆ ಘಟನೆಯಲ್ಲಿ ಗಾಯಗೊಂಡ ಚೈತ್ರಾ, ಶಶಿಕಲಾ, ಸುಜಾತಾ, ಗೀತಾ, ಲಲಿತಾ ಎಂಬುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಸ್ನೇಹಿತೆಯರಿಗೆ ಅಫಘಾತವಾಗಿದೆ ಎಂಬ ಸುದ್ದಿ ತಿಳಿದ ಮಕ್ಕಳು ಜಿಲ್ಲಾಸ್ಪತ್ರೆಗೆ ಧಾವಿಸಿದ್ದು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುತ್ತಿತ್ತು. ಅರವಿಂದ ಹೆಬಸೂರ ಎಂಬ ವಿಜಯಾ ಬ್ಯಾಂಕಿನ ಮ್ಯಾನೇಜರ ಕಾರು ವೇಗವಾಗಿ ಬಂದಿದ್ದರಿಂದ ಈ ಅಪಫಾತ ಸಂಭವಿಸಿದೆ.

ಕುಮಾರ ಪಾಟೀಲ
JMR news Chikodi

admin